1 ಕೊರಿಂಥದವರಿಗೆ 6 : 1 (KNV)
ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯ ವಿದ್ದರೆ ನ್ಯಾಯವಿಚಾರಣೆಗಾಗಿ ಪರಿಶುದ್ಧರ ಮುಂದೆ ಹೋಗದೆ ಅನೀತಿವಂತರ ಮುಂದೆ ಹೋಗುವದಕ್ಕೆ ನಿಮ್ಮಲ್ಲಿ ಯಾವನಿಗಾದರೂ ಧೈರ್ಯ ವುಂಟೋ?
1 ಕೊರಿಂಥದವರಿಗೆ 6 : 2 (KNV)
ಪರಿಶುದ್ಧರು ಲೋಕಕ್ಕೆ ತೀರ್ಪುಮಾಡು ವರೆಂಬದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪು ಹೊಂದಬೇಕಾಗಿರುವಾಗ ಅತ್ಯಲ್ಪವಾದವುಗಳ ವಿಷಯದಲ್ಲಿ ತೀರ್ಪುಮಾಡು ವದಕ್ಕೆ ನೀವು ಅಯೋಗ್ಯರಾಗಿದ್ದೀರೋ?
1 ಕೊರಿಂಥದವರಿಗೆ 6 : 3 (KNV)
ನಾವು ದೂತರಿಗೆ ತೀರ್ಪುಮಾಡುವೆವೆಂದು ನಿಮಗೆ ಗೊತ್ತಿಲ್ಲವೋ? ಹಾಗಾದರೆ ಐಹಿಕ ಜೀವಿತಕ್ಕೆ ಸಂಬಂಧ ಪಟ್ಟ ವಿಷಯಗಳಲ್ಲಿ ಇನ್ನು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ?
1 ಕೊರಿಂಥದವರಿಗೆ 6 : 4 (KNV)
ಐಹಿಕ ಜೀವನದ ವಿಷಯಗಳಲ್ಲಿ ನ್ಯಾಯತೀರಿಸತಕ್ಕವುಗಳು ನಿಮ್ಮಲ್ಲಿದ್ದರೆ ಸಭೆಯಲ್ಲಿ ಅತ್ಯಲ್ಪರೆಂದು ಎಣಿಸಲ್ಪಟ್ಟವರನ್ನು ತೀರ್ಪು ಮಾಡುವದಕ್ಕೆ ನೇಮಿಸಿರಿ.
1 ಕೊರಿಂಥದವರಿಗೆ 6 : 5 (KNV)
ನಿಮ್ಮನ್ನು ನಾಚಿಕೆ ಪಡಿಸುವದಕ್ಕೆ ಇದನ್ನು ಹೇಳುತ್ತೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯತೀರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?
1 ಕೊರಿಂಥದವರಿಗೆ 6 : 6 (KNV)
ಆದರೆ ಸಹೋದರನು ಸಹೋದರನ ಮೇಲೆ ವ್ಯಾಜ್ಯ ವಾಡುವದಲ್ಲದೆ ಅವಿಶ್ವಾಸಿಗಳ ಮುಂದೆಯೂ ಹೋಗುತ್ತಾನೆ.
1 ಕೊರಿಂಥದವರಿಗೆ 6 : 7 (KNV)
ಆದದರಿಂದ ಈಗ ನಿಮ್ಮಲ್ಲಿ ಒಬ್ಬನಿಗೆ ವಿರೋಧವಾಗಿ ಇನ್ನೊಬ್ಬನು ನ್ಯಾಯಸ್ಥಾನಕ್ಕೆ ಹೋಗುವದು ಶುದ್ಧ ತಪ್ಪು; ಇದಕ್ಕಿಂತ ನೀವು ಅನ್ಯಾಯವನ್ನು ಯಾಕೆ ಸಹಿಸಬಾರದು? ಇಲ್ಲವೆ (ಸೊತ್ತನ್ನು ಅಪಹರಿಸುವದನ್ನು) ನೀವು ಯಾಕೆ ಸಹಿಸಿಕೊಳ್ಳಬಾರದು?
1 ಕೊರಿಂಥದವರಿಗೆ 6 : 8 (KNV)
ನೀವು ನಿಮ್ಮ ಸಹೋದರ ರಿಗೆ ಅನ್ಯಾಯ ಮಾಡುತ್ತೀರಿ; ಅವರನ್ನೇ ಅಪಹರಿಸುತ್ತೀರಿ.
1 ಕೊರಿಂಥದವರಿಗೆ 6 : 9 (KNV)
ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ; ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು
1 ಕೊರಿಂಥದವರಿಗೆ 6 : 10 (KNV)
ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.
1 ಕೊರಿಂಥದವರಿಗೆ 6 : 11 (KNV)
ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮನಲ್ಲಿಯೂ ತೊಳೆಯಲ್ಪಟ್ಟಿರಿ; ಶುದ್ಧೀಕರಿಸಲ್ಪಟ್ಟಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.
1 ಕೊರಿಂಥದವರಿಗೆ 6 : 12 (KNV)
ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತ ವಾಗಿವೆ. ಆದರೆ ಎಲ್ಲವುಗಳು ವಿಹಿತವಾಗಿಲ್ಲ; ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತವಾಗಿವೆ, ಆದರೆ ನಾನು ಯಾವ ಅಧಿಕಾರಕ್ಕೂ ಒಳಪಡುವದಿಲ್ಲ.
1 ಕೊರಿಂಥದವರಿಗೆ 6 : 13 (KNV)
ಆಹಾರಪದಾರ್ಥಗಳು ಹೊಟ್ಟೆಗಾಗಿ, ಹೊಟ್ಟೆಯು ಆಹಾರಪದಾರ್ಥಗಳಿಗಾಗಿ ಇವೆ; ಆದರೆ ಅದನ್ನೂ ಅವುಗಳನ್ನೂ ದೇವರು ನಾಶಮಾಡುತ್ತಾನೆ; ಈಗ ದೇಹವು ಜಾರತ್ವಕ್ಕಾಗಿ ಅಲ್ಲ, ಆದರೆ ಕರ್ತನಿಗಾಗಿ ಇದೆ; ಕರ್ತನು ದೇಹಕ್ಕೋಸ್ಕರ ಇದ್ದಾನೆ.
1 ಕೊರಿಂಥದವರಿಗೆ 6 : 14 (KNV)
ದೇವರು ಕರ್ತನನ್ನು ಎಬ್ಬಿಸಿದ್ದಲ್ಲದೆ ತನ್ನ ಸ್ವಂತಬಲದಿಂದ ನಮ್ಮನ್ನೂ ಎಬ್ಬಿಸುವನು.
1 ಕೊರಿಂಥದವರಿಗೆ 6 : 15 (KNV)
ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳನ್ನು ನಾನು ತೆಗೆದುಬಿಟ್ಟು ಸೂಳೆಯ ಅಂಗಗಳಾಗ ಮಾಡಬಹುದೋ? ಹಾಗೆ ಎಂದಿಗೂ ಆಗಬಾರದು.
1 ಕೊರಿಂಥದವರಿಗೆ 6 : 16 (KNV)
ಏನು? ಸೂಳೆಯನ್ನು ಸೇರಿಕೊಳ್ಳುವವನು ಅವಳೊಂದಿಗೆ ಒಂದೇ ದೇಹ ವಾಗಿದ್ದಾನೆಂಬದು ನಿಮಗೆ ತಿಳಿಯದೋ? ಇಬ್ಬರು ಒಂದೇ ಶರೀರವಾಗಿರುವರೆಂದು ಆತನು ಹೇಳು ತ್ತಾನಲ್ಲಾ.
1 ಕೊರಿಂಥದವರಿಗೆ 6 : 17 (KNV)
ಆದರೆ ಕರ್ತನನ್ನು ಸೇರಿಕೊಳ್ಳುವವನು ಒಂದೇ ಆತ್ಮವಾಗಿದ್ದಾನೆ.
1 ಕೊರಿಂಥದವರಿಗೆ 6 : 18 (KNV)
ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ. ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹಕ್ಕೆ ಹೊರತಾಗಿವೆ. ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪವನ್ನು ಮಾಡುತ್ತಾನೆ.
1 ಕೊರಿಂಥದವರಿಗೆ 6 : 19 (KNV)
ಏನು? ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಆಲಯವಾಗಿದೆಯೆಂಬದು ನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸೊತ್ತಲ್ಲ;ನೀವು ಕ್ರಯಕ್ಕೆ ಕೊಂಡುಕೊಳ್ಳಲ್ಪಟ್ಟವರಾಗಿದ್ದೀರಿ; ಆದದರಿಂದ ದೇವರ ಸೊತ್ತಾಗಿರುವ ನಿಮ್ಮ ದೇಹದಲ್ಲಿಯೂ ನಿಮ್ಮ ಆತ್ಮದಲ್ಲಿಯೂ ದೇವರನ್ನು ಮಹಿಮೆಪಡಿಸಿರಿ.
1 ಕೊರಿಂಥದವರಿಗೆ 6 : 20 (KNV)
ನೀವು ಕ್ರಯಕ್ಕೆ ಕೊಂಡುಕೊಳ್ಳಲ್ಪಟ್ಟವರಾಗಿದ್ದೀರಿ; ಆದದರಿಂದ ದೇವರ ಸೊತ್ತಾಗಿರುವ ನಿಮ್ಮ ದೇಹದಲ್ಲಿಯೂ ನಿಮ್ಮ ಆತ್ಮದಲ್ಲಿಯೂ ದೇವರನ್ನು ಮಹಿಮೆಪಡಿಸಿರಿ.

1 2 3 4 5 6 7 8 9 10 11 12 13 14 15 16 17 18 19 20

BG:

Opacity:

Color:


Size:


Font: